ಆಳ್ವಾಸ್ ನುಡಿಸಿರಿ 2016. ’ಕರ್ನಾಟಕ : ನಾಳೆಗಳ ನಿರ್ಮಾಣ’

0
52
Alvas Nudisiri
Alvas Nudisiri

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ’ಆಳ್ವಾಸ್ ನುಡಿಸಿರಿ’ಯು ನವೆಂಬರ್ ತಿಂಗಳ 18, 19 ಮತ್ತು 20 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ರಂದು ’ಕರ್ನಾಟಕ : ನಾಳೆಗಳ ನಿರ್ಮಾಣ’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ನವಂಬರ್ ೧೮ ಶುಕ್ರವಾರದಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ನವಂಬರ್ ೨೦ರಂದು ಅಪರಾಹ್ನ ನುಡಿಸಿರಿ ಸಮ್ಮೇಳನವು ಸಂಪನ್ನಗೊಳ್ಳಲಿದೆ. ಪ್ರತಿನಿಧಿಯಾಗ ಬಯಸುವ ಕನ್ನಡಾಭಿಮಾನಿಗಳು ೧೦೦/- ರೂ. ಪ್ರತಿನಿಧಿ ಶುಲ್ಕ ನೀಡಿ ಸದಸ್ಯರಾಗಬಹುದು. ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಯಾವುದೇ ಶುಲ್ಕಗಳಿರುವುದಿಲ್ಲ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿದ್ದು ಕನ್ನಡ ನಾಡು-ನುಡಿ-ಸಂಸ್ಕೃತಿಯ ಕುರಿತು ಕಾಳಜಿ ಇರುವ ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ’ಆಳ್ವಾಸ್ ನುಡಿಸಿರಿ 2016’ನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ಸಂಪರ್ಕಕ್ಕಾಗಿ : 08258-261229, Email: nudisiri@alvas.org

Date : 18 November – 20 November

Venue : Vidyagiri, Moodbidri

LEAVE A REPLY

Please enter your comment!
Please enter your name here